Kanade Kanade

1 views

Lyrics

ಕಾಣದೇ, ಕಾಣದೇ ಮನಸಿನ ನೋವು?
 ಕೇಳದೇ, ಕೇಳದೇ ಹೃದಯದ ನೋವು?
 ♪
 ಕಣ್ಣ ನೀರಿನಲ್ಲೇ ಕನಸು ಜಾರುತ್ತಿದೆ
 ಮತ್ತೆ ಮತ್ತೆ ನಿನ್ನ ನೆನಪೇ ಕಾಡುತ್ತಿದೆ
 ಕಣ್ಣ ನೀರಿನಲ್ಲೇ ಕನಸು ಜಾರುತ್ತಿದೆ
 ಮತ್ತೆ ಮತ್ತೆ ನಿನ್ನ ನೆನಪೇ ಕಾಡುತ್ತಿದೆ
 ಕಾಣದೇ, ಕಾಣದೇ ಮನಸಿನ ನೋವು?
 ಕೇಳದೇ, ಕೇಳದೇ ಹೃದಯದ ನೋವು?
 ♪
 ಸನಿಹದಲ್ಲೇ ಇದ್ದರೂನೂ ಕಾಣುತಿಲ್ಲ ಪ್ರೀತಿ ನೀನು
 ವಿಧಿಯ ಆಟ ಹೇಗೆ ನೋಡು, ದೂರ ದೂರ ನೀನು ನಾನು
 ನಿನ್ನಯ ಪ್ರೀತಿಯ ನೆನಪಲೇ ಇರುವೆನು
 ನಿನ್ನಯ ಪ್ರೀತಿಯ ನೆನಪಲೇ ಉಳಿವೆನು
 ನಿನ್ನ ಜೊತೆ ಬಾಳಲೆಂದು ಆಸೆಯಿಂದ ಕಾಯುತಿರುವೆ
 ಕಾಯುತಿರುವೆ
 ಕಾಯುತಿರುವೆ
 ಕಾಣದೇ, ಕಾಣದೇ ಮನಸಿನ ನೋವು?
 ಕೇಳದೇ, ಕೇಳದೇ ಹೃದಯದ ನೋವು?
 ♪
 ನೀನೇ ಬಂದು ಹೇಳು ಒಮ್ಮೆ ಇಷ್ಟವಾದರೆ ನಾನು
 ಬ್ರಹ್ಮ ಬರೆದ ಹಾಗೇ ಆಗಲಿ ಕಷ್ಟವೇ ಆದರೂನೂ
 ಇಷ್ಟವೋ, ಕಷ್ಟವೋ, ಮರೆಯೆ ನಾ ನಿನ್ನನು
 ಹೃದಯದ ಬಡಿತವೇ ನಿಂತರೂ ನಾ ನಿಲ್ಲೆನು
 ಕೊನೆಯವರೆಗೂ ನಿನ್ನೇ ನಾನು ತುಂಬ ತುಂಬ ಪ್ರೀತಿಸುವೆನು
 ಪ್ರೀತಿಸುವೆನು
 ಪ್ರೀತಿಸುವೆನು
 ಕಾಣದೇ, ಕಾಣದೇ ಮನಸಿನ ನೋವು?
 ಕೇಳದೇ, ಕೇಳದೇ ಹೃದಯದ ನೋವು?
 

Audio Features

Song Details

Duration
03:56
Key
8
Tempo
80 BPM

Share

More Songs by Naresh Iyer

Albums by Naresh Iyer

Similar Songs