Kodagana Koli Nungitha
22
views
Lyrics
ಕೋಡಗನ ಕೋಳಿ ನುಂಗಿತ್ತಾ ಕೋಡಗನ ಕೋಳಿ ನುಂಗಿತ್ತಾ, ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ ♪ ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ ಆಡು ಆನೆಯ ನುಂಗಿ, ಗೋಡೆ ಸುಣ್ಣವ ನುಂಗಿ ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ, ತಂಗಿ ಕೋಡಗನ ಕೋಳಿ ನುಂಗಿತ್ತಾ ♪ ಒಳ್ಳು ಒನಕೆಯ ನುಂಗಿ ಕಲ್ಲು ಗೂಟವ ನುಂಗಿ ಒಳ್ಳು ಒನಕೆಯ ನುಂಗಿ, ಕಲ್ಲು ಗೂಟವ ನುಂಗಿ ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತಾ, ತಂಗಿ ಕೋಡಗನ ಕೋಳಿ ನುಂಗಿತ್ತಾ ♪ ಎತ್ತು ಜಟ್ಟಗಿ ನುಂಗಿ ಬತ್ತ ಬಾನವ ನುಂಗಿ ಎತ್ತು ಜಟ್ಟಗಿ ನುಂಗಿ, ಬತ್ತ ಬಾನವ ನುಂಗಿ ಮುಕ್ಕುಟ ತಿರುವು ಅಣ್ಣ ನನ್ನ ಮೇಲಿ ನುಂಗಿತ್ತ ತಂಗಿ ಕೋಡಗನ ಕೋಳಿ ನುಂಗಿತ್ತಾ ♪ ಗುಡ್ಡ ಗವಿಯನು ನುಂಗಿ ಗವಿಯು ಇರುವೆಯ ನುಂಗಿ ಗುಡ್ಡ ಗವಿಯನು ನುಂಗಿ, ಗವಿಯು ಇರುವೆಯ ನುಂಗಿ ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತಾ, ತಂಗಿ ಕೋಡಗನ ಕೋಳಿ ನುಂಗಿತ್ತಾ ಕೋಡಗನ ಕೋಳಿ ನುಂಗಿತ್ತಾ ಕೋಡಗನ ಕೋಳಿ ನುಂಗಿತ್ತಾ ಕೋಡಗನ ಕೋಳಿ ನುಂಗಿತ್ತಾ
Audio Features
Song Details
- Duration
- 05:18
- Key
- 11
- Tempo
- 150 BPM