Paravashanadenu
Lyrics
ಪರವಶನಾದೆನು ಅರಿಯುವ ಮುನ್ನವೇ ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ ಇದಕ್ಕಿಂತ ಬೇಗ ಇನ್ನು ಸಿಗಬಾರದಿತ್ತೇ ನೀನು ಇನ್ನಾದರೂ ಕೂಡಿಟ್ಟುಕೋ ನೀ ನನ್ನನ್ನು ಕಳೆಯುವ ಮುನ್ನವೇ ಪರವಶನಾದೆನು ಅರಿಯುವ ಮುನ್ನವೇ ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ ♪ ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಈಗಲೂ ಇನ್ನು ಬೇರೆ ಏನು ಬೇಕು ಪ್ರೇಮ ಯೋಗಿ ಆಗಲು ಹೂ ಅರಳುವ ಸದ್ಧನು ನಿನ್ನ ನಗೆಯಲಿ ಕೇಳಬಲ್ಲೆ ನನ್ನ ಏಕಾಂತವನ್ನು ತಿದ್ಧಿಕೊಡು ನೀನೀಗ ನಿಂತಲ್ಲೇ ನಾನೇನೇ ಅಂದರೂನು ನನಗಿಂತ ಚೂಟಿ ನೀನು ತುಟಿಯಲ್ಲಿಯೇ ಮುಚ್ಚಿಟ್ಟುಕೋ ಮುತ್ತೊಂದನು ಕದಿಯುವ ಮುನ್ನವೇ ಪರವಶನಾದೆನು ಅರಿಯುವ ಮುನ್ನವೇ ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ ♪ ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ ನನ್ನ ಕೌತುಕ ಒಂದೊಂದೇ ಹೇಳಬೇಕು ಆಲಿಸುವಾಗ ನೋಡು ನನ್ನನ್ನೇ ಸಾಕು ಸಹವಾಸ ದೋಷದಿಂದ ಸರಿ ಹೋಗ ಬಹುದೇ ನಾನು ನನಗಾಗಿಯೇ ಕಾದಿಟ್ಟುಕೋ ಹಠವೊಂದನು ಕೆಣಕುವ ಮುನ್ನವೇ ಪರವಶನಾದೆನು ಅರಿಯುವ ಮುನ್ನವೇ ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ
Audio Features
Song Details
- Duration
- 03:55
- Key
- 1
- Tempo
- 84 BPM